Monday, January 3, 2011

ಕೆಲಸ ಗಿಟ್ಟಿಸಿಕೊಳ್ಳುವ ಸುಲಭ ಸೂತ್ರಗಳು.. ೨

ನಿಮ್ಮ ಆಸೆ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸುವುದು ಆಗಿದ್ದರೆ ನಿಮ್ಮ ಟೆಕ್ನಿಕಲ್ ಸ್ಕಿಲ್ ಹಾಗು ಸಾಫ್ಟ್ ಸ್ಕಿಲ್ ಅತ್ಯುತ್ತಮವಾಗಿರಬೇಕು ಅಥವಾ ನಿಮಗೆ ಕಂಪನಿಯೊಳಗೆ ಅತ್ಯುತ್ತಮವಾದ ಕೊಂಡಿಯಿರಬೇಕು :)

ಮುಂಚೆ ವಿವರಿಸಿದ ಅಂಶಗಳನ್ನು ನೀವು ತೋರ್ಪಡಿಸಲು ಅಸಮರ್ಥರಾದರೆ, ನಿಮ್ಮ ಅಸಮರ್ಥೆನೆಗೆ ತಕ್ಕನಾದ ನಿಮಿಗಿಷ್ಟವಾಗದ ಕೆಲಸ ಸಿಗುತ್ತದೆ, ನಿಮಗೆ ಮಾಡಲು ಮನಸ್ಸಿದ್ದರೆ!!!

ಹೆಚ್ಚಿನ ಶ್ರಮ ವಹಿಸಿದಷ್ಟು ಒಳ್ಳೆಯ ಉದ್ಯೋಗ ಗಿಟ್ಟಿಸುವುದು ಖಚಿತ. ಶ್ರಮ ವಹಿಸುವುದು ಕೇವಲ ಪರ್ಸೆಂಟೇಜ್ ತೆಗೆಯುವುದಕ್ಕೆ ಮಾತ್ರ ಸೀಮಿತವಿದ್ದರೆ ಅದು ವ್ಯರ್ಥ, ನಿಮ್ಮ ಇತರೆ ಸ್ಕಿಲ್‌ಗಳನ್ನು ಹೆಚ್ಚಿಸಿಕೊಳ್ಳುವುದಕ್ಕು ಶ್ರಮ ಪಡಲೇಬೇಕು.

ಕೆಲಸ ಹುಡುಕುವ ನಿಮಗೆ ಮೊದಲು ತಿಳಿದಿರಬೇಕಾಗಿರುವುದು
೧. ಯಾವುದೆ ಕಂಪನಿಯು ಟೈಂ ಪಾಸ್ ಮಾಡಲು ಬ್ಯುಸಿನೆಸ್ಸ್ ಅಂತ ಶುರುಮಾಡಿರುವುದಿಲ್ಲ. ಅವರು ಹಣ ಮಾಡಲು ಕೂತಿರುತ್ತಾರೆ. ಸುಲಭವಾಗಿ ಹಣ ಮಾಡಲು ಅವರು ತಲೆ ಒಡೆಯುತ್ತಿರುವುದಿಲ್ಲ ಕಷ್ಟ ಪಟ್ಟು ಯೋಜನೆ ಹಾಕಿರುತ್ತಾರೆ.

೨. ನಿಮ್ಮನ್ನು ಇಂಟರ್ವ್ಯೂವ್‌ಗೆ ಕರೆಯಬೇಕೆಂದರೆ ಅದು ಅವರ ಅಗತ್ಯತೆ ಸೂಚಿಸುತ್ತದೆ, ಅಗತ್ಯವಿಲ್ಲವೆಂದರೆ ನಿಮ್ಮ ರೆಸ್ಯುಮೆಯನ್ನು ಒಮ್ಮೆಯು ಸಹ ನೋಡುವುದಿಲ್ಲ, ಟೆಸ್ಟ್ ಅಥವಾ ಇಂಟರ್ವ್ಯೂವ್‌ಗೆ ಕರೆಯಲು ಮೈಲ್ ಮಾಡುವುದು ಆಮೇಲಿನ
ವಿಚಾರ.

೩. ಕೆಲಸ ಸಿಗುವಾಗ ನಿಮ್ಮ ಸಮಯ + ಬುದ್ಧಿಶಕ್ತಿ + ತಾಂತ್ರಿಕತೆ + ಜಾಣ್ಮೆ ಮುಂತಾದವುಗಳನ್ನು "ಅಡ" ಇಟ್ಟ ಹಾಗೆ!!! ಹಾಗಾಗಿ ಕೆಲಸ ಹುಡುಕುವ ಪರಿ, ಅದನ್ನು ಗಿಟ್ಟಿಸುವ ಪರಿ ನಿಮ್ಮ "ಕೆರಿಯರ್"ಅನ್ನು ರೂಪಿಸುತ್ತದೆ, ಜೀವನ ಶೈಲಿಯನ್ನು ಬದಲಾಯಿಸುತ್ತದೆ.


೪. ಒಳ್ಳೆಯ ಪರ್ಸೆಂಟೇಜ್ ಇರುವವರು ನೀವೊಬ್ರೆ ಅಲ್ಲ ಲಕ್ಷ ಜನ ಇದಾರೆ, ಮೇಲಾಗಿ ಕೆಲಸ ಸಿಗಲು ಪೂರಕವಾಗುವ ಇತರೆ ಕೋರ್ಸ್‌ಗಳನ್ನು ಮಾಡಿರುವವರು ಇರುತ್ತಾರೆ, ಕಂಪನಿ ಒಳಗೆ "ಲಿಂಕ್"ಇರುವವರು ಇರುತ್ತಾರೆ. ಇಂತಹ ಜನಗಳ ಮಧ್ಯೆ ನೀವು ಸ್ಪರ್ಧಿಸಬೇಕು(ಕಾಂಪೀಟ್) ಮಾಡಬೇಕು!!

೫. ನಿಮ್ಮ ರೆಸ್ಯುಮೆ ಕಳಿಸಲು ಅಗತ್ಯವಿರುವ ೫ ನಿಮಿಷವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸದೆ ಮಾಡುವ ಅಸಡ್ಡೆ ನಿಮ್ಮನ್ನು ಕೆಲಸಕ್ಕೆ ಪರಿಗಣಿಸದೆ ಇರುವ ಹಾಗೆ ಮಾಡುತ್ತದೆ.

೬.ಮೈಲ್ ಕಳಿಸುವ ರೀತಿ ನೀತಿಯನ್ನು ಕಡ್ಡಾಯವಾಗಿ ಅರಿಯಬೇಕು.

ನಿಮ್ಮ ಜೀವನವನ್ನು ಎಷ್ಟು ಸೀರಿಯಸ್ ಆಗಿ ಪರಿಗಣಿಸುತ್ತೀರೊ ಆ ಸೀರಿಯಸ್‌ನೆಸ್ ನಿಮ್ಮ ಕೆಲಸ ಹುಡುಕುವ ಪರಿಯಲ್ಲಿ ಪ್ರತಿಬಿಂಬಿಸಬೇಕು, ನಿಮ್ಮ ರೆಸ್ಯುಮೆಯಲ್ಲಿ ಪ್ರತಿಬಿಂಬಿಸಬೇಕು,ರೆಸ್ಯುಮೆ ಕಳಿಸುವ ಕವರಿಂಗ್ ಲೆಟರ್ ನಲ್ಲಿ ಪ್ರತಿಬಿಂಬಿಸಬೇಕು, ರೆಸ್ಯುಮೆ ನಿಮ್ಮನ್ನು ನಿಮ್ಮ ಸಾಧನೆಗಳನ್ನು ಪ್ರತಿಬಿಂಬಿಸಬೇಕು !!    

ರೆಸ್ಯುಮೆ ಕಳಿಸುವಾಗ ಸಿಕ್ಕಿದ್ ಮೈಲ್ ಐಡಿಗೆಲ್ಲಾ, ಪುಕ್ಸಟ್ಟೆ ಅಲ್ವಾ ಅಂತ ಬುಟ್ಟಿಗೆ ಕಸ ಎಸೆದ ಹಾಗೆ ರೆಸ್ಯುಮೆ ಕಳಿಸ್ತಿದ್ರೆ ಎನೂ ವರ್ಕ್ ಔಟ್ ಆಗುವುದಿಲ್ಲ.

೧. ಉದಾಸೀನದಿಂದ ಕವರಿಂಗ್ ಲೆಟರ್ ಇಲ್ಲದೆ ಮಿಂಚೆ ಕಳಿಸಿದರೆ.
೨. ಬೇಜವಾಬ್ದಾರಿಯಿಂದ ಸರಿಯಾದ ಫಾರ್ಮ್ಯಾಟ್ ಇಲ್ಲದ ರೆಸ್ಯುಮೆ ಸಿದ್ಧಪಡಿಸಿದರೆ.
೩. ಅಸಡ್ಡೆಯಿಂದ ರೆಸ್ಯುಮೆ ಅಟ್ಯಾಚ್ ಮಾಡಿರುವೆ ಅಂತ ಭಾವಿಸಿ ರೆಸ್ಯುಮೆ ಅಟ್ಯಾಚ್ ಆಗಿರದ ಮಿಂಚೆ ಕಳಿಸಿದರೆ.
೪. ಕೆಲಸ ಕೋರಿ ರೆಸ್ಯುಮೆ ಕಳಿಸುವಾಗ ಫಾರ್ಮಲ್ ಆದ ಬ್ಯುಸಿನೆಸ್ ಭಾಷೆಯನ್ನು ಬಳಸದೆ "hey, I am looking for job please give me chance" ಅಂತ ಅಸಂಭದ್ದತೆಯನ್ನು ಸೂಚಿಸುವ ಭಾಷೆ ಬಳಸಿ ಮೈಲ್ ಮಾಡಿದರೆ.
೫. ಕನಿಷ್ಟ ಎರಡು ದಿನಕ್ಕೊಮ್ಮೆ ಆದರು ಮೈಲ್ ಚೆಕ್ ಮಾಡದೆ ಹೋದರೆ.
೬. ಇಂಟರ್ವ್ಯೂವ್ ಅಥವಾ ರಿಟನ್ ಟೆಸ್ಟ್ ಕರೆ ಬರುಬಹುದೆಂಬ ನಿರೀಕ್ಷೆ ಇದ್ದು ಸಹ ಮೊಬೈಲ್ ಅನ್ನು ದಿನಗಟ್ಟಲೆ/ವಾರಗಟ್ಟಲೆ ನಾಟ್ ರೀಚೆಬಲ್ ಅಥವಾ ಸ್ವಿಚ್ ಆಫ್ ಮಾಡಿದರೆ.
ಮೇಲೆ ಸೂಚಿಸಿದ ಅಂಶಗಳಲ್ಲಿ ನೀವು ಯಾವುದನ್ನು ಮಾಡಿದರು ಸಹ ನಿಮಗೆ ಬರಬಹುದಾದ ರಿಟನ್ ಟೆಸ್ಟ್ ಕರೆ/ಇಂಟರ್ವ್ಯೂವ್ ಕರೆ ಮೇಲೆ ನೀವೆ ಕಲ್ಲು ಹಾಕಿಕೊಂಡಂತೆ.

ತಿಳಿದುಕೊಳ್ಳಿ, ನಿಮಗೆ ಕೆಲಸ ಸಿಗುವ ಸಾಧ್ಯತೆ ಹಾಳು ಮಾಡಿಕೊಳ್ಳಲಿಕ್ಕೆ ನೀವೆ ಸಾಕು ಬೇರೆಯವರ ಅಗತ್ಯವೆ ಇಲ್ಲ!!

ಶ್ರಮ ವಹಿಸಿ, ಜಾಣ್ಮೆ ಉಪಯೋಗಿಸಿ, ಪ್ರೊಫೆಷನಲ್ ತರಹ ವರ್ತಿಸಿ.. ಕೆಲಸ ಕಟ್ಟಿಟ್ಟ ಬುತ್ತಿ.

ಮುಂದಿನ ಭಾಗದಲ್ಲಿ ಕವರಿಂಗ್ ಲೆಟರ್  ಹಾಗು ರೆಸ್ಯುಮೆ ಫಾರ್ಮ್ಯಾಟ್  ಬಗ್ಗೆ  ಬರೆಯುತ್ತೇನೆ..
ಮುಂದುವರೆಯುತ್ತದೆ....

9 comments:

  1. Tumba upayukta mahithi
    Dhanyavadagalu

    mundu varisi

    ReplyDelete
  2. Neevu Kotta mahiti freshers ge thumba upayuktavadaddu.

    Dhanyavadagalu

    ReplyDelete
  3. thanku for ur information sir........ this will help everyone a lot.........Dhanyavadagalu

    ReplyDelete
  4. dhanyavaadagalu.. maahiti upayukta anisidare saadhyavaadashtu janarige vishaya tilisi.. avarigu sahaaya maadi..

    ReplyDelete
  5. edannu prati nirodyogigalhige olleya sandesh..... idannu naavella ariyabeku...

    ReplyDelete
  6. nimma information tumba chennagide dayavittu etaraha mail kalisutta eri yuvakarige upayukthayaguttade nimaa informationge thanks

    ReplyDelete
  7. Tumba chennagide dhanyavadagalu

    ReplyDelete
  8. Renuka prasad ravare,
    tumbaa olle vishayagalanna tilisiddira,danyavadagalu.
    namma fresher hudugarige tumbaa upayuka mahiti. ide reeti innu kelavau viahyagalannu prastapisi. 1. Interview ge hege hogabeku--dress,neatness,body language during interview attend maadbekadre..

    Mahesh

    ReplyDelete
  9. ನಿಮ್ಮ ಸಲಹೆಗೆ ಧನ್ಯವಾದ ಮಹೇಶ್, ನೀವು ತಿಳಿಸಿದ ವಿಷಯಗಳ ಬಗ್ಗೆಯು ಸಹ ಬರೆಯುತ್ತೇನೆ. ಅವೆಲ್ಲವು ಮುಂದಿನ ಬ್ಲಾಗ್ ಪೋಸ್ಟ್‌ಗಳಲ್ಲಿ ಹಂತ ಹಂತವಾಗಿ ಬರಲಿವೆ.. ಆದಷ್ಟು ಹೆಚ್ಚಿನ ಕನ್ನಡಿಗರಿಗೆ ವಿಷಯ ತಲುಪಿಸುವಲ್ಲಿ ನಿಮ್ಮ ಸಹಕಾರ ಅಗತ್ಯ..

    --ಪ್ರಸಾದ್

    ReplyDelete