Monday, December 27, 2010

ಕೆಲಸ ಗಿಟ್ಟಿಸಿಕೊಳ್ಳುವ ಸುಲಭ ಸೂತ್ರಗಳು.. ೧

             ಕೆಲಸ ಗಿಟ್ಟಿಸಿಕೊಳ್ಳಬೇಕು ಅನ್ನೊದು ಎಲ್ಲರ ಹಂಬಲ ಆದ್ರು ಅದು ಎಲ್ಲರಿಗು ಸಿಗುತ್ತಾ ಅನ್ನೊದೆ ಪ್ರಶ್ನೆ?
ಡಿಗ್ರಿ ಪಾಸಾದ ನಂತರ ಅಂತಹ ಕೆಲಸ ಬೇಕು ಇಂತಹದ್ದೆ ಕಂಪನಿ ಅಲ್ಲಿ ಕೆಲಸ ಆಗಬೇಕು,ಅದು ಬೇಕು,ಇದು ಬೇಕು,ಹೀಗಿರಬೇಕು,ಹಾಗಿರಬೇಕು,ಅಲ್ಲಿರಬೇಕು,ಇಲ್ಲಿರಬೇಕು ಅನ್ನೊ "ಬೇಕು"ಗಳ ಸರಮಾಲೆ
ಇರೋದು ಸಹಜ ಹಾಗೆಯೆ ಅಂತಹ "ಬೇಕು"ಗಳು ಇರಬೇಕಾದ್ದು ಸಹ ಅತ್ಯವಶ್ಯ!! ಜೀವನದಲ್ಲಿ ನಿಶ್ಚಿತ ಗುರಿ ಇಲ್ಲದೆ ಮಾಡಿದ ಎಲ್ಲಾ ಕೆಲಸಗಳು ವ್ಯರ್ಥ ಆಗುವ ಸಾಧ್ಯತೆಗಳೆ ಹೆಚ್ಚು.
            ಕೆಲಸ ಗಿಟ್ಟಿಸಿಕೊಳ್ಳಲಿಕ್ಕೆ ಹಲವಾರು ಹೆಜ್ಜೆಗಳಿವೆ ಮತ್ತೆ ಅವೆಲ್ಲವನ್ನು ಕಡೆಗಣಿಸುವಂತಿಲ್ಲ,ಹಾಗೆಯೆ ಅತಿ ಅವಶ್ಯವಾದುದು "ಕೆಲಸ ಹುಡುಕುವ ಮುನ್ನ ನಮ್ಮನ್ನು ನಾವು ಮಾನಸಿಕವಾಗಿ ಯಾವ ರೀತಿಯಾಗಿ ತಯಾರು ಮಾಡಿಕೊಳ್ಳುತ್ತೇವೆ" ಎನ್ನುವುದು ಸಹ ಕೆಲಸ ಸಿಗುವ ಸಾಧ್ಯತೆಗಳನ್ನು ನಿರ್ಧರಿಸುತ್ತದೆ.ಪ್ರತಿ ಕಾರ್ಯಸಿದ್ಧಿಗು ಹೆಜ್ಜೆ,ಹೆಜ್ಜೆಯಿಟ್ಟು ಕಾರ್ಯ ಸಾಧಿಸುವುದು ಸಹಜ ಆದರೆ ಇಲ್ಲಿ ಪ್ರಶ್ನೆ ಏಳುವುದು "ಮಾನಸಿಕ ತಯಾರಿ" ಯಾಕೆ ಬೇಕು ಅಂತ?
               ಕೆಲಸ ಗಿಟ್ಟಿಸೊಕೊಳ್ಳೇದೆ ನಮ್ಮ ಉದ್ದೇಶ ಆಗಿರುವಾಗ, ಆ ಉದ್ದೇಶ ಈಡೇರುವುದಕ್ಕೆ ನಾವು ಯಾವ ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತೇವೆ ಎನ್ನುವುದು ಸಹ ಮುಖ್ಯವಾಗಿರುತ್ತದೆ. ಸಿದ್ದತೆಗಳನ್ನು ಹೆಚ್ಚಿಸಿಕೊಂಡಷ್ಟು ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಆಗುತ್ತದೆ. ಇಂದು ರಾಜ್ಯವಾಪಿ ನೂರಾರು ಇಂಜಿನಿಯರಿಂಗ್ ಕಾಲೇಜುಗಳಿವೆ,ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಹೊರಬರುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಹೋದರು ಸಹಿತ ಇರುವ ಕಾಂಪಿಟೆಷನ್ ಕಮ್ಮಿ ಮಾಡುತ್ತದೆ ಎನ್ನುವ ಸುಳ್ಳು ಭರವಸೆ ನಮಗೆ ನಾವು ಹೇಳಿಕೊಳ್ಳಲಿಕ್ಕಾಗದು ಇದೆಲ್ಲದರ ಮೇಲಾಗಿ ದೇಶದ ನಾನಾ ಮೂಲೆಗಳಿಂದ ಬೆಂಗಳೂರಿನಲ್ಲೆ ಕೆಲಸ ಗಿಟ್ಟಿಸಬೇಕೆಂದು ಬರುವ ಹೊರ ರಾಜ್ಯದವರು, ಅವರಿಗೆ ಬೆಂಗಳೂರು ಕಂಪನಿಗಳಲ್ಲಿರುವ "ಲಿಂಕು"ಗಳು,ಕೆಲಸ ಗಿಟ್ಟಿಸೆ ತೀರಬೇಕೆಂಬ ಹಟ,ದಿಟ್ಟತನ ಅದಕ್ಕಾಗಿ ಅವರು ಮಾಡಿಕೊಳ್ಳುವ ಹೊಂದಾಣಿಕೆಗಳು,ತಯಾರಿ ಹಾಗು ಕೊಡುಕೊಳುಗೆ(compromise)ಗಳು ಅವರಿಗೆ ಯಶಸ್ಸು ದೊರಕಿಸುತ್ತದೆ. ನೀವು ಶೀಘ್ರದಲ್ಲಿ ಇಷ್ಟೆಲ್ಲ ಮಾಡಲು ಸಿದ್ಧರಿದ್ದರೆ ಅತಿ ಶೀಘ್ರದಲ್ಲಿ ನಿಮಗೆ ಕೆಲಸ ಸಿಕ್ಕೆ ಸಿಗ್ಗುತ್ತದೆ ಎನ್ನುವ ಆಶಾಕಿರಣದೊಂದಿಗೆ ಸಮಾಧಾನದಿಂದ ಮುಂದೆ ಓದಿ.     
ಕೆಲಸ ಹುಡುಕುವ ಮುನ್ನ ಕಡ್ಡಾಯವಾಗಿ ನೀವು ನಿಮ್ಮ ಅರ್ಹತೆಯನ್ನು ಅಳೆದುಕೊಳ್ಳಬೇಕು,ಅರ್ಹತೆಯೆನ್ನುವುದು ಟೆಕ್ನಿಕಲ್ ಸ್ಕಿಲ್ ಹಾಗು ಸಾಫ್ಟ್ ಸ್ಕಿಲ್ ಎಂದು ವಿಭಾಗಿಸಿದಾಗ ನಿಮ್ಮ ಶೈಕ್ಷಣಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಎಷ್ಟರ ಮಟ್ಟಿಗೆ ವಿಷಯ ಜ್ಞಾನ ಇದೆಯೆಂದು ಅಳೆಯುವುದು. ನಿಮ್ಮ ಸ್ನೇಹಿತರೊಡಗೂಡಿ ಮಾಡಿದ ಪ್ರಾಜೆಕ್ಟ್ ಇಂದ ನೀವು ಏನೆಲ್ಲಾ ಕಲಿತಿರಿ,ಉಪಯೋಗಿಸಿದ "ಸಾಫ್ಟ್ವೇರ್ ಟೂಲ್"ಗಳು ಯಾವುದು,ಪ್ರಾಜೆಕ್ಟ್ ಮಾಡುವಾಗ ಅನುಭವಿಸಿದ ತೊಂದರೆಗಳೇನು ಎನ್ನುವ ವಿಚಾರಗಳು  ಟೆಕ್ನಿಕಲ್ ಸ್ಕಿಲ್ ಅಡಿ ಬರುವುದು ಹಾಗೆಯೆ ಸ್ನೇಹಿತರೊಡಗೂಡಿ ಪ್ರಾಜೆಕ್ಟ್ ಮಾಡಿದಾಗ "ಟೀಂ ವರ್ಕ್" ಎನ್ನುವುದರ ಅಭಿಪ್ರಾಯ ಅದರಿಂದ ಅರಿತ ಸಾಧಕ,ಬಾಧಕಗಳು.ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಜಾಣ್ಮೆ,ಆಂಗ್ಲ ಭಾಷೆಯ ಹಿಡಿತ, ಇಂಟರ್ವ್ಯೂವ್ ಗೆ ಹೋಗಿರುವಾಗ ನಿಮ್ಮ ವೇಷ ಭೂಷಣ,ಹಾಗೆಯೆ ಕೈ ಕುಲುಕುವಾಗ ಶಕ್ತಿ ಬಿಟ್ಟು ಗಟ್ಟಿಯಾಗು ಹಿಡಿಯದೆ,ಸಂಕೋಚ ಸೂಚಿಸುವ ಮೆದುಹಿಡಿಯನ್ನು ಹಿಡಿಯದೆ ಭರವಸೆ ಮೂಡಿಸುವಂತಹ "ಭದ್ರ ಹಿಡಿ", ಕೈ ಕುಲುಕದೆ ಅಸಡ್ಡೆಯನ್ನು ಸೂಚಿಸುವ ಲಕ್ಷಣಗಳು, ಇನ್ನು ಹಲವಾರು ವಿಷಯಗಳು ನಿಮ್ಮ ಸಾಫ್ಟ್ ಸ್ಕಿಲ್ ಗಳನ್ನು ಅಳೆಯುತ್ತವೆ.

   -- ಮುಂದುವರೆಯುವುದು